Header Ads

Chia Seeds ತೂಕ ಇಳಿಸಲು ಇದು ಉತ್ತಮ ಆಯ್ಕೆ .

ಇತ್ತೀಚಿನ ದಿನಗಳಲ್ಲಿ ಹಲವರು ಚಿಯಾ ಬೀಜಗಳನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುತ್ತಾರೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುವ ಕಾರಣ ಇದು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ.ತೂಕ ಇಳಿಕೆಯಾಗುವುದರಿಂದ ಹೃದಯದ ಆರೋಗ್ಯ ಸುಧಾರಿಸುವವರೆಗೆ ಚಿಯಾದಿಂದ ಆರೋಗ್ಯಕ್ಕಾಗುವ ಪ್ರಯೋಜನ ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ.
ಚಿಯಾ ಬೀಜ ಸೇವನೆಯ ಆರೋಗ್ಯ ಪ್ರಯೋಜನಗಳು

* ಚಿಯಾ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.
* ಹೃದಯದ ಆರೋಗ್ಯಕ್ಕಾಗಿ: ಚಿಯಾ ಬೀಜಗಳಲ್ಲಿ ನಾರಿನಾಂಶ, ಹೃದಯದ ಆರೋಗ್ಯಕರಕ್ಕೆ ಅಗತ್ಯವಿರುವ ಕೊಬ್ಬಿನಾಂಶ, ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಇವು ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮ. ಇವುಗಳು ನಿಮ್ಮನ್ನು ಹೃದ್ರೋಗದ ಅಪಾಯದಿಂದ ತಡೆಯುತ್ತದೆ.
ತೂಕ ಇಳಿಕೆ ಹಾಗೂ ಡಯೆಟ್‌ ಪ್ರಿಯರ ಆಹಾರಕ್ರಮದಲ್ಲಿ ಅಗ್ರಸ್ಥಾನ ಪಡೆದಿರುವುದು ಚಿಯಾ ಸೀಡ್ಸ್‌. ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ.
ಇದು ತೂಕ ಇಳಿಕೆಗೆ ಮಾತ್ರವಲ್ಲ, ಇದರ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಚಿಯಾ ಬೀಜಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸುತ್ತದೆ. ಇದಲ್ಲದೆ, ಅವು ಹೃದಯದ ತೊಂದರೆಗಳು, ಮೂಳೆಗಳ ಬಲವರ್ಧನೆಗೂ ಉಪಯುಕ್ತ.
ಅದಕ್ಕಾಗಿಯೇ ಅವುಗಳನ್ನು ಸ್ಮೂಥಿಗಳು, ಸಲಾಡ್‌ಗಳು ಸೇರಿದಂತೆ ಕೆಲವು ಪ್ರಮುಖ ಭಕ್ಷ್ಯಗಳಲ್ಲಿ ಸೇರಿಸಿ ಸೇವಿಸಲಾಗುತ್ತದೆ. ಇಷ್ಟೇ ಅಲ್ಲದೇ ಸಿಯಾ ಬೀಜಗಳ ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ.


No comments

Powered by Blogger.