ಚಿಯಾ ಬೀಜಗಳನ್ನು ದಿನವೂ ಸೇವಿಸಿದರೆ ಆಗುವ ಪ್ರಯೋಜನಗಳು👍
ಚಿಯಾ ಬೀಜದ ಲಕ್ಷಣಗಳು
ಚಿಯಾ ಬೀಜಗಳು ಸಣ್ಣ ಬೀಜಗಳಾಗಿದ್ದು, ಅವು ಕಪ್ಪು, ಕಂದು ಅಥವಾ ಬಿಳಿ ಬಣ್ಣದಲ್ಲಿ ಕಂಡುಬರುತ್ತವೆ. ಈ ಬೀಜಗಳು ಪುದೀನ ಕುಟುಂಬದ ಸದಸ್ಯರಾದ ಸಾಲ್ವಿಯಾ ಹಿಸ್ಪಾನಿಕಾ ಎಂಬ ಹೂಬಿಡುವ ಸಸ್ಯದ ಕೊಯ್ಲು ಉತ್ಪನ್ನಗಳಾಗಿವೆ. ಇವು ಗಾತ್ರದಲ್ಲಿ ಸಣ್ಣದಾಗಿದ್ದರೂ ಸಾಕಷ್ಟು ಪೋಷಕಾಂಶವನ್ನು ಹೊಂದಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಚಿಯಾ ಬೀಜಗಳನ್ನು ತಮ್ಮ ಡಯೆಟ್‌ನಲ್ಲಿ ಅಳವಡಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಚಿಯಾ ಬೀಜಗಳನ್ನು ಸಬ್ಜಾ ಬೀಜಗಳೆಂದು ಕನ್‌ಫ್ಯೂಜ್ ಮಾಡಿಕೊಳ್ಳಲಾಗುತ್ತದೆ. ಆದರೆ ಇವು ಗುಣಲಕ್ಷಣಗಳಲ್ಲಿ ಸಂಪೂರ್ಣ ಭಿನ್ನವಾಗಿದೆ.*ಇದರಲ್ಲಿ ಬಾಳೆಹಣ್ಣಿಗಿಂತ 64% ಹೆಚ್ಚು ಪೊಟ್ಯಾಷಿಯಂ ಇರುತ್ತದೆ.
*ಇದರಲ್ಲಿ ಎರಡು ಪಟ್ಟು ಬ್ಲ್ಯೂಬೆರಿಗಳ ಉತ್ಕರ್ಷಣ ನಿರೋಧಕಗಳಿರುತ್ತವೆ.
*ಇದರಲ್ಲಿ 41% ಫೈಬರ್ ಇರುತ್ತದೆ.
*ಇದರಲ್ಲಿ ಹಾಲಿನಲ್ಲಿ ಇರುವುದಕ್ಕಿಂತ ಐದು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುತ್ತದೆ.
*ಇದರಲ್ಲಿ 20% ಪ್ರೋಟೀನ್ ಇರುತ್ತದೆ.
*ಇದರಲ್ಲಿ 32% ಮೆಗ್ನೀಶಿಯಂ ಇರುತ್ತದೆ.
ಚಿಯಾ ಬೀಜದ ಉಪಯೋಗಗಳು
ಚಿಯಾ ಬೀಜದ ನೀರನ್ನು ಕುಡಿಯುವುದು ದಿನದ ಅತ್ಯಂತ ಆರೋಗ್ಯಕರ ಆರಂಭವಾಗಿದ್ದು, ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಚಿಯಾ ಬೀಜಗಳು ಆಂಟಿಆಕ್ಸಿಡೆಂಟ್‌ಗಳು, ಖನಿಜಗಳು, ಫೈಬರ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒಳಗೊಂಡಿದ್ದು ಗಣನೀಯ ತೂಕ ಕಡಿತವನ್ನು ಉತ್ತೇಜಿಸುತ್ತವೆ. ಪ್ರತಿದಿನ ಒಂದು ಲೋಟ ಚಿಯಾ ಸೀಡ್ಸ್ ನೀರನ್ನು ಕುಡಿಯುವ ಅಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Post a Comment