6 ವಿಧದ ತೈಲಗಳು(oils)ಮತ್ತು ಅವುಗಳ ಪ್ರಯೋಜನ
ತೈಲಗಳಲ್ಲಿ ಹಲವಾರು ವಿಧಗಳಿದ್ದು ಅದರಲ್ಲಿ 6 ವಿಧಗಳು ಪ್ರಮುಖವಾದವುಗಳು.ಸಾಮಾನ್ಯವಾಗಿ ತೈಲಗಳು ತಯಾರಿಸಿದ ಪದಾರ್ಥಗಳ ಗುಣಗಳನ್ನು ಹೊಂದಿರುತ್ತವೆ.
1. ತಿಲ ತೈಲ
*ಎಣ್ಣೆಗಳ ಗುಂಪಿನಲ್ಲಿ ತಿಲ ತೈಲ ಅತ್ಯುತ್ತಮವಾದುದು.
*ಇದರ ತೀಕ್ಷ್ಣ ಹಾಗು ವ್ಯವಾಹಿಗುಣದಿಂದ, ಇದು *ದೇಹದ ಸಣ್ಣ ಸಣ್ಣ ವಾಹಿನಿಗಳಲ್ಲಿಯೂ ಭೇದಿಸುತ್ತದೆ.
*ತಿಲ ತೈಲವು ಉಷ್ಣ ವೀರ್ಯ ಹೊಂದಿದ್ದು ಇದು ಕಫವನ್ನು ಹೆಚ್ಚಿಸುವುದಿಲ್ಲ.
*ಇದು ತೆಳ್ಳಗಿನ ವ್ಯಕ್ತಿಗಳನ್ನು ದಪ್ಪ ಮತ್ತು ದಪ್ಪ ವ್ಯಕ್ತಿಗಳನ್ನು ತೆಳ್ಳಗೆ ಮಾಡುತ್ತದೆ.
*ಮಲಬದ್ಧತೆ ಮತ್ತು ಕ್ರಿಮಿ ಜಂತುಗಳನ್ನು ಕೊಳ್ಳುತ್ತದೆ.
*ಸರಿಯಾಗಿ ಸಂಸ್ಕರಿಸಿದ ನಂತರ ಇದನ್ನು ಹಲವಾರು ರೋಗಗಳಲ್ಲಿ ಸೂಚಿಸಲಾಗುತ್ತದೆ.
2. ಎರಂಡ ತೈಲ(castor oil)
*ಈ ಎಣ್ಣೆಯು ಬಿಸಿ ಮತ್ತು ಕಹಿಯಾಗಿರುತ್ತದೆ.
*ಈ ಎಣ್ಣೆಯು ರುಚಿಯು ಬಿಲಿಬದನೆ ರುಚಿಯಾಗಿರುತ್ತದೆ.
*ಜ್ವರ ಮತ್ತು ಸೊಂಟ ನೋವನ್ನು ನಿವಾರಿಸುತ್ತದೆ.
*ಹೊಟ್ಟೆ ಮತ್ತು ಬೆನ್ನು ಉರಿತವನ್ನು ನಿವಾರಿಸುತ್ತದೆ.
3.ಸರ್ಸಾಪ ತೈಲ(ಸಾಸಿವೆ ಎಣ್ಣೆ)
*ಸಾಸಿವೆ ಎಣ್ಣೆಯು ಕಟು ರಸವನ್ನು ಹೊಂದಿರುತ್ತದೆ.
*ಈ ಎಣ್ಣೆಯು ಲಘು ಗುಣಗಳನ್ನು ಹೊಂದಿರುತ್ತದೆ.
* ಸಾಸಿವೆ ಎಣ್ಣೆಯು ಉಷ್ಣ ವೀರ್ಯವನ್ನು ಹೊಂದಿರುತ್ತದೆ.
*ಇದು ಪೈಲ್ಸ್ ಮತ್ತು ಕ್ರಿಮಿರೋಗಗಳನ್ನು ನಿವಾರಿಸಲು ಸಹಾಯಮಾಡುತ್ತದೆ.
4.ವಿಭಿತಕ ತೈಲ
* ಈ ಎಣ್ಣೆಯು ಮಧುರ ರಸವನ್ನು ಹೊಂದಿದೆ.
* ಇದು ಶೀತ ವೀರ್ಯವನ್ನು ಹೊಂದಿರುತ್ತದೆ.
*ಈ ಎಣ್ಣೆಯು ಗುರು ಗುಣವನ್ನು ಹೊಂದಿರುತ್ತದೆ.
* ಈ ಎಣ್ಣೆಯು ಕೂದಲಿಗೆ ಔಷಧಿ ಕಾರ್ಯವನ್ನು ನೀವ್ರಹಿಸುತ್ತದೆ.
*ಪಿತ್ತ ಮತ್ತು ವಾತವನ್ನು ತಗ್ಗಿಸಲು ಉಪಯುಕ್ತವಾಗಿದೆ.
5. ನಿಂಬಾ ತೈಲ
*ನಿಂಬ ತೈಲವು ತಿಕ್ತ ರಸವನ್ನು ಹೊಂದಿರುತ್ತದೆ.
*ಇದು ಅತಿ ಉಷ್ಣ ವೀರ್ಯವನ್ನು ಹೊಂದಿರುವುದಿಲ್ಲ.
*ಈ ಎಣ್ಣೆಯು ಕ್ರಿಮಿ ರೋಗಗಳಲ್ಲಿ ಉಪಯುಕ್ತವಾಗಿದೆ.
*ಇದು ಕುಷ್ಠ ರೋಗ ನಿರ್ವಹಣೆಯಲ್ಲಿ ಉಪಯುಕ್ತವಾಗಿದೆ.
*ಇದು ಕಫದೋಷವನ್ನು ತಗ್ಗಿಸುತ್ತದೆ.
6.ಉಮಾ ಕುಸುಂಭ ತೈಲ
* ಉಮಾ ಮತ್ತು ಕುಸುಮ್ಬ ಬೀಜಗಳಿಂದ ಪಡೆದ ತೈಲವು ಉಮಾ ಕುಸುಂಬ ತೈಲ.
*ಈ ಎಣ್ಣೆಯು ಉಷ್ಣ ವೀರ್ಯಯನ್ನು ಹೊಂದಿರುತ್ತದೆ.
*ಈ ಎಣ್ಣೆಯು ಕಫ ಮತ್ತು ಪಿತ್ತವನ್ನು ಹೆಚ್ಚಿಸುತ್ತದೆ.
Post a Comment