Fifa world cup football
ಫುಟ್ಬಾಲ್ ವಿಶ್ವಕಪ್ ಬೆಳೆದುಬಂದ ಹಾದಿ...!
ಫಿಫಾ ವಿಶ್ವಕಪ್ ಫುಟ್‌ಬಾಲ್ ಕ್ರೀಡಾ ಜಗತ್ತಿನ ಎಲ್ಲಾ ಕ್ರೀಡಾಭಿಮಾನಿಗಳನ್ನು ಒಟ್ಟಿಗೆ ಕೂಡಿಸುವ ಹಬ್ಬ.ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪಂದ್ಯಾವಳಿ,ಅಂತರರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟ(ಫಿಫಾ) ನಡೆಸುವ ಜಾಗತಿಕ ಮಟ್ಟದ ಟೂರ್ನಿ ಇದಾಗಿದೆ.ಈ ವಿಶ್ವಕಪ್ ಟೂರ್ನಿ ಆರಂಭವಾಗಿದ್ದು 1930ರಲ್ಲಿ ಮೊಟ್ಟ ಮೊದಲ ಆವೃತ್ತಿಯನ್ನು ದಕ್ಷಿಣ ಅಮೇರಿಕಾದ ಉರುಗ್ವೆ ಆತಿಥ್ಯವನ್ನು ವಹಿಸಿತ್ತು.
ಮೊದಲ ಅಂತರರಾಷ್ಟ್ರೀಯ ಪಂದ್ಯ ನಡೆದದ್ದು 1872ರಲ್ಲಿ ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿ ಸೆಣಸಾಡಿದ್ದವು.1900 ಮತ್ತು 1904ರ ಒಲಿಂಪಿಕ್ಸ್ ಗಳಲ್ಲಿ ಫುಟ್‌ಬಾಲ್‌ನ್ನು ಕೇವಲ ಪ್ರದರ್ಶನದ ಭಾಗವಾಗಿ ನಡೆಸಲಾಯಿತು.
1904ರಲ್ಲಿ ಫಿಫಾ ಸ್ಥಾಪನೆಗೊಂಡ ಬಳಿಕ ಒಲಿಂಪಿಕ್ಸ್ ನಿಂದಾಚೆಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಪ್ರಯತ್ನ ಆರಂಭವಾಯಿತು,
1908ರಲ್ಲಿ ಒಲಿಂಪಿಕ್ಸ್‌ನಲ್ಲಿ ಅಧಿಕೃತ ಮಾನ್ಯತೆ ಸಿಕ್ಕಿತು.
ಗ್ರೇಟ್ ಬ್ರಿಟನ್ ಚೊಚ್ಚಲ ಚಿನ್ನದ ಪದಕ ಜಯಿಸಿತು.ಅನಂತರ ವಿಶ್ವಕಪ್ ಎನ್ನುವ ಪರಿಕಲ್ಪನೆ ಆರಂಭವಾಗಿ 1930ರಲ್ಲಿ ತನ್ನ ಮೊದಲ ಆವೃತ್ತಿಯನ್ನು ಆರಂಭಿಸಿತು.
ಈ ತನಕ 21ಆವೃತ್ತಿ ಆಯೋಜಿಸಲಾಗಿದೆ.
2ನೇ ವಿಶ್ವ ಮಹಾಯುದ್ಧದ ಸಮಯ ಹೊರತುಪಡಿಸಿ 1930ರಿಂದ ಇಲ್ಲಿಯವರೆಗೆ 21ಆವೃತ್ತಿಗಳನ್ನು ಫಿಫಾ ಆಯೋಜಿಸಿದೆ.1948ರ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಿತ್ತಾದರೂ 1950ರ ವಿಶ್ವಕಪ್ ನಲ್ಲಿ ಭಾಗವಹಿಸಲಿಲ್ಲ.ಆ ಬಳಿಕ ಫುಟ್‌ಬಾಲ್ ವಿಶ್ವಕಪ್ ನಲ್ಲಿ ಅರ್ಹತೆಯನ್ನು ಗಳಿಸಲು ವಿಫಲವಾಗಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಜನಪ್ರಿಯ ಕ್ರೀಡಾಕೂಟವೆಂದು ಫಿಫಾ ವಿಶ್ವಕಪ್ ಫುಟ್‌ಬಾಲ್ ಭಾಜನವಾಗಿದೆ.ಬಹುತೇಕ ಫುಟ್‌ಬಾಲ್ ಪ್ರೀಯರು ವಿಶ್ವಕಪ್ ಆರಂಭವಾದರೆ ಆಟದತ್ತ ಆಸಕ್ತಿಯನ್ನು ತೋರಿಸುವುದು ಸರ್ವೆಸಾಮಾನ್ಯ. ಈ ಕ್ರೀಡಾಕೂಟ ಜಗತ್ತಿನಲ್ಲಿ ಅತೀ ಹೆಚ್ಚಿನ ವೀಕ್ಷಣೆ ಪಡೆದಿರುವ ಕ್ರೀಡಾಕೂಟವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಇದಕ್ಕೆ ಪುಷ್ಟಿಕೊಡುವಂತೆ 2006ರ ವಿಶ್ವಕಪ್ ನ ಎಲ್ಲಾ ಪಂದ್ಯಗಳು ಸೇರಿ ಅಂದಾಜು 26.29 ಬಿಲಿಯನ್ ಜನ ವೀಕ್ಷಿಸಿದ್ದರು ಎಂದು ಸಮೀಕ್ಷೆಯೊಂದು ತಿಳಿಸಿದೆ.ಇನ್ನೂ ಇದೇ ಪಂದ್ಯಾವಳಿಯ ಫೈನಲ್ ಪಂದ್ಯವನ್ನು 715 ಮಿಲಿಯನ್ ಜನರಿಂದ ಅಂದರೆ ಜಗತ್ತಿನ 9ನೇ ಒಂದು ಭಾಗದಷ್ಟು ಜನ ವೀಕ್ಷಣೆ ಮಾಡಿದ್ದು ಇದಕ್ಕೆ ತಾಜಾ ಉದಾಹರಣೆಯಾಗಿದೆ.
ವಿಶ್ವಕಪ್ ಟ್ರೋಫಿಯ ವಿಶೇಷತೆಗಳು.
ವಿಶ್ವಕಪ್ ಟ್ರೋಫಿ 36 ಸೆಂ.ಮೀ ಉದ್ದವಿದ್ದು 18ಕ್ಯಾರೆಟ್ ಚಿನ್ನದಿಂದ ತಯಾರಿಸಲ್ಪಟ್ಟಿದೆ.ವಿಶೇಷವೆಂದರೆ ವಿಜೇತ ತಂಡಕ್ಕೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾತ್ರ ಟ್ರೋಫಿಯನ್ನು ನೀಡಲಾಗುತ್ತದೆ, ನಂತರ ವಿಜೇತ ತಂಡಕ್ಕೆ ಮೂಲ ಟ್ರೋಫಿ ಹೋಲುವ ಚಿನ್ನ ಲೇಪನದ ಟ್ರೋಫಿಯನ್ನು ಕೊಡಲಾಗುತ್ತದೆ.
Post a Comment